ಬಾಗಲಕೋಟೆ : ಜಿಲ್ಲೆಯ ಹುನಗುಂದ ತಾಲೂಕಿನ ರಕ್ಕಸಗಿ ಗ್ರಾಮ ಪಂಚಾಯಿತಿಯಲ್ಲಿ 70 ವರ್ಷದ ವಯೋವೃದ್ದರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ನರೇಗಾದಲ್ಲಿ ಕೆಲಸ ಮಾಡುತ್ತಿದ್ದಾರೆ. ವಯಸ್ಸು ಆಯಿತು.ನಮ್ಮಗೆ ಕೆಲಸ ಮಾಡಲು ಆಗೋದಿಲ್ಲ ಎಂದು ಮನೆಯಲ್ಲಿ ಕುಳಿತುಕೊಳ್ಳದೇ, ವಯೋವೃದ್ದರು ನರೇಗಾದ ಕೆಲಸ ಮಾಡುತ್ತಿದ್ದಾರೆ.
ರಕ್ಕಸಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇವಿನಮಟ್ಟಿ ಗ್ರಾಮದಲ್ಲಿ ನಡೆಯುತ್ತಿರುವ ಕೆರೆ ಹೊಳು ಎತ್ತುವ ಕಾಮಗಾರಿಯಲ್ಲಿ 70 ವರ್ಷ ದಾಟಿದ ವಯೋವೃದ್ಧರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಒಂದು ಕೈಯಲ್ಲಿ ಕೋಲು ಹಿಡಿದು ಮತ್ತೊಂದು ಕೈಯಲ್ಲಿ ಬುಟ್ಟಿ ಹೊತ್ತುಕೊಂಡು ಹರೆಯದ ವ್ಯಕ್ತಿಗಳಂತೆ ಕೆಲಸ ಮಾಡುತ್ತಿದ್ದಾರೆ. ಇನ್ನು 70 ವರ್ಷದ ಅಜ್ಜಿಯರಂತು 20 ವರ್ಷದ ಮಹಿಳೆಯರಂತೆ ಕೆಲಸ ಮಾಡುತ್ತಿದ್ದಾರೆ.
ಹದಿಹರೆಯದ ಯುವಕ – ಯುವತಿಯರೇ ದುಡಿಯದೇ ಮೊಬೈಲ್ ಹಿಡಿದುಕೊಂಡು ಕುಂತಿರುವಾಗ, ಈ ವಯೋವೃದ್ಧರು ಎಲ್ಲರೂ ನಾಚುವಂತೆ ಕೆಲಸ ಮಾಡುತ್ತಿದ್ದಾರೆ. ಇದಕ್ಕೆಲ್ಲ ಕಾರಣವಾಗಿರುಯವುದು ನರೇಗಾ ಯೋಜನೆ. ಈ ಯೋಜನೆಯಿಂದ ನೂರಾರು ವಯೋವೃದ್ಧರಿಗೆ ಕೆಲಸ ಸಿಗುವಂತೆ ಆಗಿದೆ. ನರೇಗಾ ಯೋಜನೆಯು ಇಂತಹ ಸಾವಿರಾರು ವಯೋವೃದ್ಧರಿಗೆ ಕೆಲಸ ಸಿಗುವಂತೆ ಮಾಡಿದೆ.
ನರೇಗಾ ಬಗ್ಗೆ ವಯೋವೃದ್ಧರೋಬ್ಬರು ಮಾತನಾಡಿ ಮನೆಯಲ್ಲಿ ಕುಳಿತು ಸಾಕಾಗಿತ್ತು ನಮ್ಮಗೆ ನರೇಗಾ ಯೋಜನೆಯಿಂದ ಕೆರೆ,ಹಳ್ಳ ಹೂಳೆತ್ತುವ ಕೆಲಸಕ್ಕೆ ಹೋಗುತ್ತಿದ್ದೇವೆ , ಇದೇ ಹಣದಿಂದ ನಮ್ಮ ಆರೋಗ್ಯ ಹಾಗೂ ಸಮೃದ್ಧ ಜೀವನಕ್ಕೆ ದಾರಿ ಮಾಡಿಕೊಟ್ಟಿದೆ. ಕೆಲಸ ಕೊಟ್ಟ ನರೇಗಾಕ್ಕೆ , ಹಾಗೂ ಪಿಡಿಓರಿಗೆ ಧನ್ಯವಾದ ತಿಳಿಸುತ್ತೇವೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.
ಮತ್ತೊಂದು ಗಮನಾರ್ಹ ಹರಿಸಬೇಕಾದ ಸಂಗತಿ ಎಂದರೇ ರಕ್ಕಸಗಿ ಪಂಚಾಯಿತಿ ಆಡಳಿತ ವರ್ಗ ನರೇಗಾದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಶೇಷ ಚೇತನರು ಹಾಗೂ ಹೆಣ್ಣು ಮಕ್ಕಳಿಗೆ ಹೆಚ್ಚಿನ ಒತ್ತು ನೀಡಿ, ಅವರಿಗೆ ಕೂಲಿ ಕೆಲಸ ನೀಡಿದ್ದಾರೆ.