ವಾಷಿಂಗ್ಟನ್: ಖಗೋಳ ಶಾಸ್ತ್ರಜ್ಞರಿಗೆ ಅತ್ಯಂತ ಕುತೂಹಲಕಾರಿ ವಿಚಾರವಾಗಿರುವ ಮಂಗಳ ಗ್ರಹದ ಫೋಟೋವೊಂದನ್ನು ನಾಸಾ ಸಂಸ್ಥೆ ಹಂಚಿಕೊಂಡಿದೆ.
ಖ್ಯಾತ ಖಗೋಳ ವಿಜ್ಞಾನಿಗಳ ಕುತೂಹಲ ಕೆರಳಿಸಿರುವ ಆ ಗ್ರಹದಲ್ಲಿರುವ ಬೃಹತ್ ಕಂದಕದ (ಮಾರ್ಸ್ ಕ್ರೆಟರ್) ಫೋಟೋವದು. ಇದನ್ನು ಕಂದಕದ ಮೇಲಿನಿಂದ ತೀರಾ ಹತ್ತಿರದಲ್ಲಿ ತೆಗೆಯಲಾಗಿದ್ದು, ಇದು ಶೂನ್ಯ ಡಿಗ್ರಿ ರೇಖಾಂಶದಲ್ಲಿ ಹೈ ರೆಸೆಲ್ಯೂಷನ್ ಕ್ಯಾಮೆರಾದಿಂದ ತೆಗೆದಿರುವ ಫೋಟೋ ಎಂದು ನಾಸಾ ಹೇಳಿಕೊಂಡಿದೆ.
ಆ ಕಂದಕದ ತೀರಾ ಹತ್ತಿರದ ಫೋಟೋವೊಂದನ್ನು ಸೆರೆ ಹಿಡಿಯಲು ಸಾಧ್ಯವಾಗಿರುವುದು ಇದೇ ಮೊದಲು ಎಂದು ನಾಸಾ ತಿಳಿಸಿದೆ.
ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಇದನ್ನು “ಏಲಿಯೆನ್ಗಳ ಹೆಜ್ಜೆಯ ಗುರುತಿರಬಹುದು’ ಎಂದು ಊಹಿಸಲಾರಂಭಿಸಿದ್ದಾರೆ.